ಸಂಜಿದಾ ಖಾತುನ್ (ಜನನ ೪ ಏಪ್ರಿಲ್ ೧೯೩೩) ಬಾಂಗ್ಲಾದೇಶದ ಸಂಗೀತಶಾಸ್ತ್ರಜ್ಞೆ. ಅವರು ೨೦೨೧ ರಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. == ಜೀವನಚರಿತ್ರೆ == ಖಾತುನ್ ೧೯೫೫ ರಲ್ಲಿ ಢಾಕಾ ವಿಶ್ವವಿದ್ಯಾನಿಲಯದಿಂದ ಬಂಗಾಳಿ ಸಾಹಿತ್ಯದಲ್ಲಿ ತನ್ನ ಪದವಿಯನ್ನು ಪೂರ್ಣಗೊಳಿಸಿದಳು. ಅವರು ೧೯೫೭ ವಿಶ್ವ ಭಾರತಿ ವಿಶ್ವವಿದ್ಯಾಲಯದಿಂದ ಬಾಂಗ್ಲಾ ಭಾಷೆಯಲ್ಲಿ ತಮ್ಮ ಎಂಎ ಪದವಿಯನ್ನು ಪಡೆದರು. ಖಾತುನ್ ಬಂಗಾಳಿ ಸಾಹಿತ್ಯವನ್ನು ಕಲಿಸಲು ಢಾಕಾ ವಿಶ್ವವಿದ್ಯಾಲಯದ ಅಧ್ಯಾಪಕರನ್ನು ಸೇರಿದರು. ೧೯೭೧ ರ ವಿಮೋಚನಾ ಯುದ್ಧದ ಸಮಯದಲ್ಲಿ ಬಾಂಗ್ಲಾದೇಶ ಮುಕ್ತಿ ಸಂಗ್ರಾಮಿ ಶಿಲ್ಪಿ ಸಂಸ್ಥೆ ಮತ್ತು ೧೯೬೦ ರ ದಶಕದ ಆರಂಭದಲ್ಲಿ ಛಾಯಾನಾತ್ ಸಂಸ್ಥಾಪಕರಲ್ಲಿ ಖತುನ್ ಒಬ್ಬರು. ಅವರು ಛಾಯನತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಖಾತುನ್ ವಹಿದುಲ್ ಹುಕ್ ಅವರನ್ನು ವಿವಾಹವಾದರು ಮತ್ತು ಅವರಿಗೆ ೩ಮಕ್ಕಳಿದ್ದಾರೆ- ಅಪಾಲಾ ಫರ್ಹತ್ ನಾವೇದ್ (ದಿವಂಗತ), ಪಾರ್ಥ ತನ್ವೀರ್ ನಾವೇದ್, ರುಚಿರಾ ತಬಸ್ಸುಮ್ ನಾವೇದ್. == ಪ್ರಶಸ್ತಿಗಳು == ೨೦೨೧ - ಪದ್ಮಶ್ರೀ, ಭಾರತ ಸರ್ಕಾರದಿಂದ ೨೦೧೨ - ವಿಶ್ವಭಾರತಿ ವಿಶ್ವವಿದ್ಯಾನಿಲಯದಿಂದ ದೇಶಿಕೋಟ್ಟೋಮ ೨೦೧೦ - ರವೀಂದ್ರ ಪ್ರಶಸ್ತಿ ೨೦೧೦ - 5ನೇ ಸಿಟಿಸೆಲ್-ಚಾನೆಲ್ ಸಂಗೀತ ಪ್ರಶಸ್ತಿಗಳಿಂದ ಜೀವಮಾನ ಸಾಧನೆ ಪ್ರಶಸ್ತಿ ೧೯೯೮ - ಬಾಂಗ್ಲಾ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ೧೯೯೧ - ಎಕುಶೆ ಪದಕ್ ಕಬಿ ಜಾಸಿಮುದ್ದೀನ್ ಪ್ರಶಸ್ತಿ == ಉಲ್ಲೇಖಗಳು ==